Home

ಪಾಂಡವಪುರ ಪಟ್ಟಣ ಪಂಚಾಯಿತಿಯ ಪಕ್ಷಿನೋಟ 
 
ಭಾರತದ ಪ್ರಸಿದ್ಧ ಗ್ರಂಥಗಳಲ್ಲಿ ಒಂದಾದ ಮಹಾಭಾರತ
À ಕಥೆಯಲ್ಲಿ ಬರುವ ಪಾಂಡವರು ನೆಲೆಸಿದ್ದ ನಾಡು ಈ ನಮ್ಮ ಪಾಂಡವಪುರ ಪಟ್ಟಣ,ಇತಿಹಾಸದ  ಪುಟಗಳಲ್ಲಿ ಅನೇಕ ದಾಖಲೆಗಳು ದಾಖಲಾಗಿದ್ದು , ಸುಂದರವಾದ ಕಾಲುವೆ ನೀರು ಮತ್ತು ಪ್ರಾಕೃತಿಕ ಸೊಬಗಿನಿಂದ ಪ್ರಸ್ತುತ ದಿನದಲ್ಲಿ ನಾಗಲೋಟದಲ್ಲಿ ಬೆಳೆಯುತ್ತಿರುವ ಪಟ್ಟಣವಾಗಿ ಮಾರ್ಪಟ್ಟಿದೆ. ಈ ಪಟ್ಟಣದ ಸುತ್ತಮುತ್ತ ಐತಿಹಾಸಿಕ ಸ್ಥಳಗಳಾದ:ಕುಂತಿಬೆಟ್ಟ, ಮೇಲುಕೋಟೆ ಮತ್ತು ಕೆರೆತಣ್ಣೂರು ಮುಂತಾದ ರಮಣೀಯ ತಾಣಗಳ ನಡುವೆ ಈ ನಮ್ಮ ಪಟ್ಟಣವಿರುವುದು ಸಂತೋಷಕರವಾಗಿದ್ದು, ಇಂತಹ ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಪಟ್ಟಣ ನಾಗರೀಕರಿಗೆ ಸೇವೆಗಳನ್ನು ಒದಗಿಸುವುದು ನಮ್ಮ ಪಟ್ಟಣ ಪಂಚಾಯಿತಿಯ ಮೊದಲ ಆದ್ಯತೆಯಾಗಿದೆ.ಆದ್ದರಿಂದ ಈ ಪಟ್ಟಣವು 21 ಸಾವಿರದಷ್ಟು ಜನಸಂಖ್ಯೆಯಿಂದ ಕೂಡಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಕ್ರಮಬದ್ಧವಾದ ನಾನಾ ಯೋಜನೆಗಳನ್ನು ಹಾಕಿಕೊಂಡು ಕಛೇರಿಯ ಆಡಳಿತದಲ್ಲಿ ಸುಧಾರಣೆಗಳನ್ನು ಮಾಡಲಾಗಿ ಪಟ್ಟಣ ಪಂಚಾಯಿತಿ ಸಾಮನ್ಯವಾಗಿ ತಮ್ಮದೇ ಆದ ರೀತಿಯಲ್ಲಿ ಒದಗಿಸುತ್ತಿರುವ ಮೂಲಭೂತ ಸೇವೆಗಳಲ್ಲಿ ಮೌಲ್ಯಧಾರಿತವಾಗಿ ಸೇವೆಯ ವಿಸ್ತಾರವನ್ನು ಮಾಡಿಕೊಂಡು ಪರಿಸರ ಸಂರಕ್ಷಣೆಗಾಗಿ ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿ ಘನತಾಜ್ಯ ವಸ್ತುಗಳ ಸಂಗ್ರಹ, ಸಾಗಾಣಿಕೆ ಮತ್ತು ಸಂಸ್ಕರಣೆಯ ಕಾರ್ಯವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ವಹಿಸುತ್ತಿದ್ದು ಈ ಕುರಿತು  ಜನಪ್ರತಿನಿಧಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಅರಿವು ಮೂಡಿಸುವ ಸಲುವಾಗಿ ಕಂದಾಯ ಪಾವತಿಅಭಿಯಾನ, ಜಾಥ, ಇನ್ನು ಮುಂತಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿ ತೆರಿಗೆ ಸಂಗ್ರಹಿಸುವ ಒಂದು ಸ್ಥಳೀಯ ಸಂಸ್ಥೆಯಾಗಿದ್ದು , ಇದರಿಂದ ಈಗ ಜನರು ನೀರು ಮತ್ತು ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಕಛೇರಿಗೆ ಬಂದು ಪಾವತಿಸಿರುವುದು ಸಂತೋಷಕರವಾಗಿದೆ. ಅದರಂತೆ ತುಂಬಾ  ದಿನಗಳಿಂದ ಅಸ್ತವ್ಯಸ್ತವಾಗಿ ಬಿದ್ದಿದ್ದ ಅನೇಕ ದಾಖಲೆಗಳನ್ನು ಸರಿಪಡಿಸಿ ಹೊಸದಾದ ಸ್ಪರ್ಶವನ್ನು ನೀಡಿ  ಎಲ್ಲಾ ದಾಖಲೆಗಳು ಅಭಿಲೇಖಾಲಯದಲ್ಲಿ ಸಿಗುವಂತೆ ಮಾಡಿ, ಅದನ್ನು ಕಂಪ್ಯೂಟರಿಕರಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ.ಮಾನ್ಯ ಜಿಲ್ಲಾಧಿಕಾರಿಗಳು ಕಛೇರಿಗೆ ಸವಿಸ್ತಾರ ತಪಾಸಣೆಗೆ ಬಂದಾಗ ಅಭಿಲೇಖಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಸ್ಟ್ ಪ್ರಾಕ್ಟಿಸ್  ಎಂದು ಹೊಗಳಿರುವುದು ನಮ್ಮಲ್ಲಿ ಕೆಲಸ ಮಾಡಲು ಹುರಿದುಂಬಿಸಿದ ರೀತಿಯಾಗಿದೆ.

ನಮ್ಮ ಕಛೇರಿಯ ಎಲ್ಲಾ ಸಿಬ್ಬಂದಿಯವರು ಶಿಸ್ತುಬದ್ಧವಾಗಿ ಕಛೇರಿ ಸಮಯಕ್ಕೆ ಹಾಜರಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡು ಜನಸಾಮನ್ಯರೊಂದಿಗೆ ಸೌಜನ್ಯವಾಗಿ ವರ್ತನೆ ಮಾಡಿ ಆದಷ್ಟು ಶಿಘ್ರವಾಗಿ ಜನರ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ನೀಡುತ್ತಿದೆ. ಎಲ್ಲಾ ನೌಕರರು ಮೂಲಭೂತವಾದ ಕಂಪ್ಯೂಟರ್ ಜ್ಞಾನವುಳ್ಳವರಾಗಿದ್ದು , ಎಲ್ಲಾ ಮಾಹಿತಿಯನ್ನು ಕಂಪ್ಯೂಟರ್ ಮೂಲಕ ನೀಡುತ್ತಿದ್ದೇವೆ.ಪಟ್ಟಣದಲ್ಲಿ ಅನೇಕ ಉದ್ಯಾನವನಗಳಿದ್ದು , ತಾಂತ್ರಿಕ ವಿಭಾಗದಿಂದ ಅತ್ಯಂತ ಸಮರ್ಪಕವಾಗಿ ನೋಡಿಕೊಂಡು ರಾತ್ರಿಯಲ್ಲಿ ಬಣ್ಣ ಬಣ್ಣ ದೀಪಗಳಿಂದ ಉದ್ಯಾನವನಗಳು ಕಂಗೊಳಿಸುತ್ತಿವೆ. ಹಾಗೇಯೇ ಅತ್ಯಮೂಲ್ಯ ನೀರನ್ನು ಪಟ್ಟಣದ ನಾಗರೀಕರಿಗೆ ದಿನದ 24 ಘಂಟೆಗಳು ಒದಗಿಸಲಾಗುತ್ತಿರುವುದರಿಂದ ಜನ ಸಾಮನ್ಯರಿಂದ ಮೆಚ್ಚುಗೆ ವ್ಯಕ್ತವಾಗಿರುತ್ತದೆ.ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿದ್ದು, ಆದಷ್ಟು ಶೀಘ್ರವಾಗಿ ಮುಗಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಎಸ್.ಜೆ.ಎಸ್.ಆರ್.ವೈ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಜನರಿಗೆ ಮೀಸಲಿಟ್ಟಿರುವ ಅನುದಾನಗಳನ್ನು ಸಮರ್ಪಕವಾಗಿ ಸೂಕ್ತವಾಗಿ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪಿಸುವ ನಿಟ್ಟಿನಲ್ಲಿ  ಯೋಜನೆಗಳನ್ನು ರೂಪಿಸಿ ,ಅನುಷ್ಟಾನಗೊಳಿಸಲಾಗುತ್ತಿದೆ.

ಚುನಾಯಿತ ಪ್ರತಿನಿಧಿಗಳು ಹಾಗೂ ಜನಸಾಮನ್ಯರಿಂದ ಒಳ್ಳೆಯ ಮಾತುಗಳು ಬರುತ್ತಿದ್ದು, ನಮ್ಮ ಎಲ್ಲಾ ಕೆಲಸ ಕಾರ್ಯಗಳಿಗು ತುಂಬಾ ಸಹಕಾರವನ್ನು ನೀಡಿತ್ತಿರುವುದರಿಂದ ಉತ್ತಮ ಮತ್ತು ತ್ವರಿತಗತಿಯ ಸೇವೆ ಒದಗಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಹಾಗೂ ಜನಸಾಮನ್ಯರ ಭಾಗವಹಿಸುವಿಕೆಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇನ್ನು ಉತ್ತಮ ಸೇವೆ ನೀಡುವ ಗುರಿಯನ್ನು ಹೊಂದಿರುತ್ತೇವೆ.


Welcome To Pandavapura
                                   The name 'Pandavapura' means "Town of Pandavas". Mythology states that the Pandavas during their period of exile stayed here for sometime, and Kunti, mother of the Pandavas, liked the hillock so much that it became one of her favorite haunts. The town is also named after the Pandavas because of their brief stay in this region.

 

                             The name "French Rock" dates back to India's Pre-Independence days, the place was used as the camping ground by the French army, which came to help Tippu Sultan in his war against the British. It is believed that French named the small town as "French Rocks", as the town is in the vicinity of two rocky hills. After Indian Independence these rocky hills called as "Kunti Betta" by locals.  Pandavapura is approximately 130 km from Bangalore and 25 km from Mysore. It is a perfect destination for weekend get away.              

TOWN PANCHAYATH PANDAVAPURA  

                        

             ಪಾಂಡವಪುರ ಪಟ್ಟಣ ಪಂಚಾಯಿತಿಯು  1987 ರಿಂದ ಇಲ್ಲಿಯವರೆಗಿನ ಜನನ ಮತ್ತು ಮರಣದ ದಾಖಲಾತಿಗಳನ್ನು ಗಣಕೀಕೃತಗೊಳಿಸಿ ಈ ಸೇವೆಯನ್ನು ದಿನಾಂಕ 24.02.2010 ರಿಂದ ಜಾರಿಗೆ ತಂದು ಜನನ , ಮರಣದ ಪತ್ರಗಳನ್ನು ಧೃಡಿಕರಿಸಿ ವಿತರಿಸಲಾಗುತ್ತಿದೆ.

 

            


We  are happy to intimate the Citizens Of Pandavapura Town That We have Computerized Death Records From 1984 to on Date and 1987 to On Date Birth Records Under

KARNATAKA MUNICIPAL REFORMS PROJECT(KMRP). Now  The Citizens Are Requested to Visit The Service Center to Register the Birth & Death Records and Get Birth & Death Records.

 

Public Grievence Redressal Cell”-PGR has Been Opened to Address and Solve the Complaints Of Publics Within Stipulated Time. Any Pandavapura Citizen in Person Or Online Or Through Phone Call Can Register Their Complaints.

Contact Number: 08236-256139


 

 

 

 

          ಪಾಂಡವಪುರ ಪಟ್ಟಣ ಪಂಚಾಯಿತಿಯು ಸಾರ್ವಜನಿಕ ಕುಂದುಕೊರತೆ ನಿವಾರಣಾ ಘಟಕವನ್ನು ತೆರೆಯಲಾಗಿದ್ದು, ದೂರುಗಳನ್ನು ದಾಖಲಿಸಲು ಸಹಾಯವಾಣಿ ಸಂಖ್ಯೆ 08236-256139 ದೂರವಾಣಿ ಮೂಲಕ ಹಾಗೂ ಖುದ್ದಾಗಿ ದೂರುಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಯ ದ್ಯೇಯೋದ್ದೇಶಗಳು

 

         ನಗರ ಜೀವನ ವ್ಯವಸ್ಥೆಯು ಸಮರ್ಪಕವಾಗಿರಲು ಸರ್ಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈಗ ಪಟ್ಟಣ ಪಂಚಾಯಿತಿಯ ಮುಖಾಂತರ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು , ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿದಾಗ ನಗರ ನಿರ್ವಹಣೆ ಕಷ್ಟವಾದುದೇನಲ್ಲ. ಇವರೆಲ್ಲರಲ್ಲಿ ಆಡಳಿತ ನಿರ್ವಹಣಾ ಕೌಶಲ್ಯಗಳು ವೃದ್ದಿಗೂಳ್ಳಬೇಕು. ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತ  ಮತ್ತು ಅಬಿವೃದ್ಧಿ ಕಾರ್ಯಕ್ರಮಗಳು ಸುಲಲಿತವಾಗಿ ಅನುಷ್ಟಾನಗೂಳ್ಳಬೇಕು.ಹಣಕಾಸು ನಿರ್ವಹಣೆಯಲ್ಲಿ ಮತ್ತು ಇತರೆ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು.

ಅದರಂತೆ ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ದ್ಯೇಯೋದ್ಧೇಶಗಳು ಕೆಳಕಂಡಂತಿವೆ. 
 
• ಪಟ್ಟಣ, ನಗರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
• ಆರ್ಥಿಕ ಹಾಗೂ ಸಾಮಾಜಿಕ ಅಬಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
• ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
• ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ಧೇಶಗಳಿಗೆ ನೀರು ಸರಬರಾಜು ಮಾಡುವುದು.
• ಜನರ ಆರೋಗ್ಯ, ನೈರ್ಮಲ್ಯ ಕಾಪಾಡುವುದು.
• ಸಮಾಜದ ದುರ್ಬಲ ವರ್ಗಗಳ ಅಭಿವೃ ದ್ಧಿಗೆ ಕ್ರಮ ಕೈಗೂಳ್ಳುವುದು
• ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ
• ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ನಗರ ಬಡತನ ನಿವಾರಣೆ
• ಬೀದಿದೀಪ, ಬಸ್ ನಿಲ್ದಾಣ , ಸಾರ್ವಜನಿಕ ಶೌಚಾಲಯಗಳಂಥಮೂಲಸೌಕರ್ಯಗಳನ್ನುಒದಗಿಸುವುದು.
• ಜನನ-ಮರಣ ನೊಂದಣಿಯು ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
• ಕಸಾಯಿಖಾನೆಗಳ ನಿಯಂತ್ರಣ
• ಸರ್ಕಾರದ ಮಂಜೂರಾತಿಗೆ ಒಳಪಟ್ಟು ಸ್ಥಳಿಯವಾಗಿ ತೆರಿಗೆ ವಿಧಿಸುವ, ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳು ಹೊಂದಿವೆ.
• ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತ್ತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ
• ರಸ್ತೆ, ಬೀದಿಗಳ ದುರಸ್ತಿ ಮತ್ತು ನಿರ್ವಹಣೆ
• ಅಪಾಯಕಾರಿ ರೋಗಗಳ ನಿಯಂತ್ರಣ

        ಇವುಗಳು ನಮ್ಮ ಸ್ಥಳಿಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ   ಸದಾ ತೊಡಗಿರುತ್ತದೆ.   


This Page Is Maintained By    Gangadhar K.S(Chief Officer)

Date:- 06-02-2013

No. Of Visitors :
Last Updated   : 22/05/2013  Release History
Release 2.0.0, Powered By Karnataka Municipal Data Society & maintained by Pandavapura TP
This website can best viewed with the resolution 1024 * 768 using Internet Explorer 7.0 or above.
Valid CSS!